ಟೋನಿಗೆ ಟಾಕಿ ಮುಕ್ತಾಯ
Posted date: 23 Mon, Jul 2012 ? 12:10:08 PM
 ಸ್ಕೈ ಸ್ಟುಡಿಯೋಸ್ ಲಾಂಛನದಲ್ಲಿ ಪಿ.ಎನ್.ಕೃಷ್ಣಮೂರ್ತಿ(ಶ್ರೀನಗರ ಕಿಟ್ಟಿ) ಹಾಗೂ ಇಂದ್ರಕುಮಾರ್.ಬಿ.ವಿ ಅವರು ನಿರ್ಮಿಸುತ್ತಿರುವ ‘ಟೋನಿ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಗುಲ್ಬರ್ಗ, ಮುತ್ತತ್ತಿ ಮುಂತಾದಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ. ಐದು ಹಾಡುಗಳ ಚಿತ್ರೀಕರನ ಬಾಕಿಯಿದ್ದು ಕೇರಳ, ಶ್ರೀಲಂಕಾ, ಡಾರ್ಜಲಿಂಗ್‌ನಂತಹ ಸುಂದರ ಪರಿಸರದಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ. 
     ಜಯತೀರ್ಥ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಧುಕೋಕಿಲಾ ಸಂಗೀತ ನೀಡಿದ್ದಾರೆ. ಸುಜ಼್ಞಾನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್‌ಮಾದ ಸಾಹಸ ನಿರ್ದೇಶನ, ಹರ್ಷ, ಇಮ್ರಾನ್, ಧನ್‌ಕುಮಾರ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ದಿಲೀಪ್‌ರಾಜ್, ಪ್ರೀತಿ ಜಿಂಗನಿಯಾ, ಹರೀಶ್‌ರಾಯಪ್ಪ, ಶರತ್‌ಲೋಹಿತಾಶ್ವಾ, ವೀಣಾಸುಂದರ್, ಸುಚೀಂದ್ರಪ್ರಸಾದ್, ಧರ್ಮೇಂದ್ರಪ್ರಸಾದ್ ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed